ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ರೈತರಿಗೆ ಬಂಪರ್ ಘೋಷಣೆ ಮಾಡಿದ್ದು, ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ₹75,000 ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಪರಿಷ್ಕೃತ ಯೋಜನೆಯ ಪ್ರಕಾರ, 2025ರ ಮೇ 1ರಿಂದ 2026ರ ಫೆಬ್ರವರಿ 28ರ ನಡುವೆ ಸಹಕಾರಿ ಬ್ಯಾಂಕುಗಳಿಂದ ಪಡೆದ ₹75,000 ವರೆಗಿನ ಬೆಳೆ ಸಾಲ ಸಂಪೂರ್ಣವಾಗಿ ಮನ್ನಾ ಆಗಲಿದೆ. ಅದಕ್ಕಿಂತ ಹೆಚ್ಚು ಸಾಲ ಪಡೆದ ರೈತರಿಗೆ ₹35,000 ವರೆಗೆ ಮನ್ನಾ ಸೌಲಭ್ಯ ದೊರೆಯಲಿದೆ.
ಈ ಯೋಜನೆಯಿಂದ ರಾಜ್ಯಾದ್ಯಂತ ಸುಮಾರು 14.43 ಲಕ್ಷಕ್ಕೂ ಹೆಚ್ಚು ರೈತರು ನೇರ ಪ್ರಯೋಜನ ಪಡೆಯಲಿದ್ದಾರೆ. ಇದರಲ್ಲಿ 6.22 ಲಕ್ಷ ರೈತರು ಸಂಪೂರ್ಣ ಸಾಲ ಮನ್ನಾ ಪಡೆಯಲಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಯೋಜನೆಯಿಂದ ಸರ್ಕಾರಕ್ಕೆ ಸುಮಾರು ₹5,932.23 ಕೋಟಿ ಆರ್ಥಿಕ ಭಾರ ಬೀಳಲಿದೆ. ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದ ಪಾವತಿಗಳನ್ನು RBI ಮಾರ್ಗಸೂಚಿಗಳಂತೆ 45 ರಿಂದ 60 ದಿನಗಳೊಳಗೆ ಇತ್ಯರ್ಥಪಡಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
