ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಿವಾಸಿಗಳಿಗೆ ವಿದ್ಯುತ್ ವ್ಯತ್ಯಯದ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. KPTCL ಹಾಗೂ ಬೆಸ್ಕಾಂ ವತಿಯಿಂದ ಈ ಕುರಿತು ಮಾಹಿತಿ ನೀಡಲಾಗಿದೆ.

ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಯಾವೆಲ್ಲ ಪ್ರದೇಶಗಳಲ್ಲಿ ಪವರ್ ಕಟ್?

ಎಚ್ಬಿಆರ್ ಲೇಔಟ್ ಸುತ್ತಮುತ್ತ

ಎಚ್‌ಬಿಆರ್ ಲೇಔಟ್‌ನ 1ನೇ, 2ನೇ, 3ನೇ ಹಾಗೂ 5ನೇ ಬ್ಲಾಕ್, ಎಚ್‌ಬಿಆರ್ ಅರ್ಕಾವತಿ ಲೇಔಟ್, ಎಚ್‌ಬಿಆರ್ ಸಿಗ್ನಲ್ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

ಇದರೊಂದಿಗೆ ಯಾಸಿನ್ ನಗರ, ಟೀಚರ್ಸ್ ಕಾಲೋನಿ, ಕೃಷ್ಣಾ ರೆಡ್ಡಿ ಲೇಔಟ್, ಇನಾಯತ್ ನಗರ, ಗಣೇಶ ದೇವಸ್ಥಾನ ರಸ್ತೆ, ಕೆಜಿ ಹಳ್ಳಿ, ವಿನೋಭಾ ನಗರ, ಲಿಡ್ಕರ್ ಕಾಲೋನಿ ಹಾಗೂ ಜಲ ವಾಯು ವಿಹಾರ್ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆಗೆ ತೊಂದರೆಯಾಗಲಿದೆ.

ಕಮ್ಮನಹಳ್ಳಿಲಿಂಗರಾಜಪುರ ಭಾಗ

ಕಮ್ಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್, ಕೀರ್ತಿ ಲೇಔಟ್, ಲಿಂಗರಾಜಪುರ ಗ್ರಾಮ, ಜಾನಕಿರಾಮ್ ಲೇಔಟ್, ಬಿಡಿಎ ಲೇಔಟ್, ಸಿಎಂಆರ್ ರಸ್ತೆ, ಥಾಮಸ್ ರಸ್ತೆ, ಇಂದ್ರ ಸ್ಟ್ರೀಟ್, ಎಕೆ ಕಾಲೋನಿ ಹಾಗೂ ಸಂಗೊಳ್ಳಿ ರಾಯಣ್ಣ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹೆಣ್ಣೂರುಥಣಿಸಂದ್ರ ಪ್ರದೇಶ

ಹೆಣ್ಣೂರು ಹಾಗೂ ಥಣಿಸಂದ್ರ ಭಾಗದಲ್ಲಿಯೂ ಪವರ್ ಕಟ್ ಇರಲಿದೆ. ಗೋವಿಂದಪುರ ಮುಖ್ಯ ರಸ್ತೆ, ರಶಾದ್ ನಗರ, ಟೆಲಿಕಾಂ ಲೇಔಟ್, ಪ್ರಕೃತಿ ಲೇಔಟ್, ಹೆಣ್ಣೂರು, ನಾಗದೇವಿ ಇಂಡಸ್ಟ್ರೀಸ್, ನೆಹರು ರಸ್ತೆ, ಮಂಗಳಾ ಲೇಔಟ್, ಆಯಿಲ್ ಮಿಲ್ ರಸ್ತೆ, ಬಿಎಂಟಿಸಿ ನೆಹರು ರಸ್ತೆ ಹಾಗೂ ಬಿಆರ್ 2ನೇ ಬ್ಲಾಕ್ ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತವೆ.

ಇದಲ್ಲದೆ ನಾಗವಾರ ಮುಖ್ಯ ರಸ್ತೆ, ಬಿಬಿಆರ್ ನಗರ, ಕಾವೇರಿ ನಗರ, ಶಿರಡಿ ಸಾಯಿ ನಗರ, ಬಿಡಿಎಸ್ ನಗರ, ನಂದ ಗೋಕುಲ ಲೇಔಟ್, ಸಾರಾಯಿಪಾಳ್ಯ, ವಿನಾಯಕ ನಗರ, ಅಶ್ವಥ್ ನಗರ, ಅನಾಮಿಕ ಎನ್ಕ್ಲೇವ್ ಹಾಗೂ ಥಣಿಸಂದ್ರ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.

ವರ್ಕ್ ಫ್ರಂ ಹೋಮ್ ಮಾಡುವವರಿಗೆ ಎಚ್ಚರಿಕೆ

ಮಧ್ಯಾಹ್ನದ ಅವಧಿಯಲ್ಲೇ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ವರ್ಕ್ ಫ್ರಂ ಹೋಮ್ ಮಾಡುವ ಉದ್ಯೋಗಿಗಳು, ಆನ್ಲೈನ್ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಗೃಹಿಣಿಗಳು ತಮ್ಮ ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವುದು ಒಳಿತು.

ವಿದ್ಯುತ್ ಅವಲಂಬಿತವಾಗಿರುವ ಕಚೇರಿಗಳು, ಅಂಗಡಿಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ನಾಲ್ಕು ಗಂಟೆಗಳ ವಿದ್ಯುತ್ ವ್ಯತ್ಯಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, KPTCL ಹಾಗೂ ಬೆಸ್ಕಾಂ ಕೈಗೊಂಡಿರುವ ನಿರ್ವಹಣಾ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

Share.
Leave A Reply

Exit mobile version