Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • District
    • Entertainment
    • English
      • English
    The Prime Voice
    Home»Crime»“ಖಾಕಿಗೆ ಕಳಂಕ: ಅಕ್ಕಿ ವ್ಯಾಪಾರಿಗಳಿಂದ ಲಂಚ ಪಡೆದ ಪೊಲೀಸರ ಮೇಲೆ ಲೋಕಾಯುಕ್ತದ ಬಲೆ!”
    Crime

    “ಖಾಕಿಗೆ ಕಳಂಕ: ಅಕ್ಕಿ ವ್ಯಾಪಾರಿಗಳಿಂದ ಲಂಚ ಪಡೆದ ಪೊಲೀಸರ ಮೇಲೆ ಲೋಕಾಯುಕ್ತದ ಬಲೆ!”

    SandeshBy SandeshJune 19, 2026Updated:June 19, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    “ಲಂಚದ ದಾಹಕ್ಕೆ ಖಾಕಿ ಬಲಿ – ಫೋನ್‌ಪೇ ಟ್ರಾನ್ಸಾಕ್ಷನ್‌ನಿಂದಲೇ ಲೋಕಾಯುಕ್ತ ಬಲೆಗೆ ಬಿದ್ದ PSI!”

    ಕಲಬುರಗಿ: ಅಕ್ಕಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ ₹50 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

    ಯಡ್ರಾಮಿ ಠಾಣೆಯ ಪಿಎಸ್‌ಐ ವಿಶ್ವನಾಥ್ ರೆಡ್ಡಿ ಮುದ್ರಡ್ಡಿ ಮತ್ತು ಪೊಲೀಸ್ ಪೇದೆ ಸಿದ್ದಣ್ಣ ಬಿರಾದರ್ ಬಂಧಿತ ಆರೋಪಿಗಳು. ಅಕ್ಕಿ ವ್ಯಾಪಾರ ಆರಂಭಿಸಲು ಯಡ್ರಾಮಿ ತಾಲೂಕಿನ ಆನಂದ್ ಕುಮಾರ್ ಎಂಬುವವರ ಬಳಿ ₹50 ಸಾವಿರ ಲಂಚ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದರು. “ನಾವು ಬಡವರು ಸರ್” ಎಂದು ಮನವಿ ಮಾಡಿಕೊಂಡರೂ ಕೇಳದ ಪಿಎಸ್‌ಐ, ಹಣ ನೀಡಿದರೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಎಂದು ಖಡಕ್ ಸೂಚನೆ ನೀಡಿದ್ದ ಎನ್ನಲಾಗಿದೆ.

    ಇದರ ಭಾಗವಾಗಿ ಮೊದಲ ಕಂತಿನ ₹20 ಸಾವಿರವನ್ನು ಫೋನ್‌ಪೇ ಮೂಲಕ ಪಡೆದುಕೊಂಡಿದ್ದ ಆರೋಪಿಗಳು, ಉಳಿದ ₹30 ಸಾವಿರ ನೀಡುವಂತೆ ನಿರಂತರ ಒತ್ತಡ ಹೇರಿದ್ದರು. ಲಂಚ ನೀಡಲು ಇಚ್ಛಿಸದ ಆನಂದ್ ಕುಮಾರ್ ಅವರು ಕಲಬುರಗಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.

    ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ದೂರುದಾರರಿಂದ ಮತ್ತೊಂದು ಕಂತಿನ ₹20 ಸಾವಿರ ನಗದು ಸ್ವೀಕರಿಸುತ್ತಿದ್ದ ವೇಳೆ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ನನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

    ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್‌ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಅರುಣ್ ಕುಮಾರ್ ಮುರುಗುಂಡಿ ನೇತೃತ್ವದ ತಂಡ ಯಶಸ್ವಿಯಾಗಿ ದಾಳಿ ನಡೆಸಿದೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

     

    Post Views: 30
    Share. Facebook Twitter Pinterest LinkedIn Tumblr Email
    Avatar photo
    Sandesh

    Related Posts

    ವೈರಲ್ ವಿಡಿಯೋದಿಂದ ಬಯಲಾಯ್ತು ಪಿಎಸ್‌ಐನ ವಿಕೃತ ಕೃತ್ಯ; ಪೋಕ್ಸೋ ಅಡಿಯಲ್ಲಿ ಬಂಧನ

    June 30, 2026

    “ನ್ಯಾಯದ ದಾರಿಯಲ್ಲೇ ಅನ್ಯಾಯದ ಆಟ – 20 ಲಕ್ಷ ರೂ. ಸುಲಿಗೆ ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ವಿರುದ್ಧ ಪ್ರಕರಣ ಬಯಲು!”

    June 19, 2026

    ಪೊಲೀಸರ ನಿರ್ಲಕ್ಷ್ಯವೇ ವರದಾನ: ರೌಡಿಪಟ್ಟಿಯಿಂದ ಕೈಬಿಟ್ಟ 66 ಕುಖ್ಯಾತರು

    June 17, 2026
    Leave A Reply Cancel Reply

    Recent Posts

    • ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್; ಸಾಕ್ಷಿಗೆ ಬೆದರಿಕೆ ಆರೋಪದಲ್ಲಿ ದರ್ಶನ್ ಅಭಿಮಾನಿ ಬಳಗದ ಮೂವರು ಅರೆಸ್ಟ್
    • ಆರ್‌ಎಸ್‌ಎಸ್‌ ರಾಷ್ಟ್ರೀಯ ಶಕ್ತಿ ಸಮಾವೇಶಕ್ಕೆ ಬೆಳಗಾವಿ ಸಜ್ಜು; ಜುಲೈ 10ರಿಂದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮಹತ್ವದ ಸಭೆ
    • ಕ್ರಷರ್ ಬಂಡೆ ಕುಸಿದು ಭೀಕರ ದುರಂತ: 7 ಕಾರ್ಮಿಕರು ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ!
    • ಬಿಡದಿ ಮೆಗಾ ಟೌನ್‌ಶಿಪ್‌ಗೆ ಹೈಕೋರ್ಟ್ ಕಂಟಕ: ಸರ್ಕಾರದ ಯೋಜನೆಗೆ ಆರಂಭದಲ್ಲೇ ತಣ್ಣೀರೆರಚಿದ ಪಿಐಎಲ್!
    • ವೈರಲ್ ವಿಡಿಯೋದಿಂದ ಬಯಲಾಯ್ತು ಪಿಎಸ್‌ಐನ ವಿಕೃತ ಕೃತ್ಯ; ಪೋಕ್ಸೋ ಅಡಿಯಲ್ಲಿ ಬಂಧನ

    Recent Comments

    No comments to show.

    Archives

    • July 2026
    • June 2026
    • April 2026
    • March 2026
    • August 2025

    Categories

    • Crime
    • District
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.