Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • District
    • Entertainment
    • English
      • English
    The Prime Voice
    Home»Crime»ಧರ್ಮಸ್ಥಳ ಪ್ರಕರಣಕ್ಕೆ ನನ್ನ ಸಂಬಂಧವಿಲ್ಲ; ವೈರಲ್ ಸುದ್ದಿಗಳಿಗೆ ಪ್ರಕಾಶ್ ರಾಜ್ ತಿರುಗೇಟು
    Crime

    ಧರ್ಮಸ್ಥಳ ಪ್ರಕರಣಕ್ಕೆ ನನ್ನ ಸಂಬಂಧವಿಲ್ಲ; ವೈರಲ್ ಸುದ್ದಿಗಳಿಗೆ ಪ್ರಕಾಶ್ ರಾಜ್ ತಿರುಗೇಟು

    The Prime VoiceBy The Prime VoiceJune 12, 2026Updated:June 12, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಬೆಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ, ಕೆಲ ಪ್ರಭಾವಿ ವ್ಯಕ್ತಿಗಳು ತನ್ನ ಮೇಲೆ ಒತ್ತಡ ಹೇರಿದ್ದು, ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾನೆ.

    ಇದೇ ವೇಳೆ, ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

    ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ನಟ ಪ್ರಕಾಶ್ ರಾಜ್, ತಮ್ಮ ವಿರುದ್ಧ ಹರಡುತ್ತಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮ್ಮ ಹೆಸರು ಪ್ರಕರಣದೊಂದಿಗೆ ಜೋಡಿಸಲಾಗುತ್ತಿರುವುದು ಆಧಾರರಹಿತ ಹಾಗೂ ಸುಳ್ಳು ಸುದ್ದಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    “ಧರ್ಮಸ್ಥಳ ಪ್ರಕರಣದ ವಿಚಾರವಾಗಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರು ಪ್ರಸ್ತಾಪವಾಗುತ್ತಿದೆ. ಇದು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಷಯವಾಗಿದೆ. ನಾನು ಪ್ರಸ್ತುತ ಊರಿನ ಹೊರಗಿದ್ದೇನೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡುತ್ತೇನೆ. ದಯವಿಟ್ಟು ಯಾವುದೇ ವದಂತಿಗಳು ಅಥವಾ ಗಾಳಿ ಸುದ್ದಿಗಳನ್ನು ನಂಬಬೇಡಿ,” ಎಂದು ಅವರು ಹೇಳಿದ್ದಾರೆ.

    ಪ್ರಕರಣದಲ್ಲಿ ಹಲವು ವ್ಯಕ್ತಿಗಳ ಹೆಸರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಿಚಾರ ಮತ್ತಷ್ಟು ಸಂಕೀರ್ಣ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.

    Post Views: 161
    Bangalore news breaking news Chinnayya court case Dharmasthala case fake news High Court Kannada news latest news Prakash Raj The Prime Voice viral news ಕನ್ನಡ ಸುದ್ದಿ ಗಾಳಿ ಸುದ್ದಿ ಚಿನ್ನಯ್ಯ ತಾಜಾ ಸುದ್ದಿ ಧರ್ಮಸ್ಥಳ ನ್ಯಾಯಾಲಯ ಬೆಂಗಳೂರು ಸುದ್ದಿ ಬ್ರೇಕಿಂಗ್ ನ್ಯೂಸ್ ವೈರಲ್ ಸುದ್ದಿ ಹೈಕೋರ್ಟ್
    Share. Facebook Twitter Pinterest LinkedIn Tumblr Email
    Avatar photo
    The Prime Voice
    • Website

    Related Posts

    2026ರಲ್ಲಿ ಜಗತ್ತು ನಡುಗುತ್ತಾ? ನೇಪಾಳ ದುರಂತದ ಬಳಿಕ ಮತ್ತೆ ವೈರಲ್ ಆಯ್ತು ಬಾಬಾ ವಂಗಾ ಭವಿಷ್ಯ!.

    September 3, 2026

    ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.

    September 3, 2026

    ಓವರ್‌ಟೇಕ್ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ: ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR!.

    September 3, 2026
    Leave A Reply Cancel Reply

    Recent Posts

    • 2026ರಲ್ಲಿ ಜಗತ್ತು ನಡುಗುತ್ತಾ? ನೇಪಾಳ ದುರಂತದ ಬಳಿಕ ಮತ್ತೆ ವೈರಲ್ ಆಯ್ತು ಬಾಬಾ ವಂಗಾ ಭವಿಷ್ಯ!.
    • ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.
    • India Postal Department: ಮಹಿಳೆಯರಿಗೆ ಅಂಚೆ ಇಲಾಖೆಯಿಂದ ಭರ್ಜರಿ ಅವಕಾಶ! ‘ಪೋಸ್ಟಲ್ ಶಕ್ತಿ’ ಹುದ್ದೆಗೆ ಸೆ.11ರಂದು ನೇರ ಸಂದರ್ಶನ.
    • ಓವರ್‌ಟೇಕ್ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ: ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR!.
    • ಬೆಂಗಳೂರು ಪವರ್ ಕಟ್: ಬೆಂಗಳೂರಿಗರಿಗೆ ಅಲರ್ಟ್! ಸೆ.3ರಂದು ಈ ಪ್ರಮುಖ ಪ್ರದೇಶಗಳಲ್ಲಿ 4 ಗಂಟೆ ಕರೆಂಟ್ ಇರಲ್ಲ.

    Recent Comments

    No comments to show.

    Archives

    • September 2026
    • August 2026
    • July 2026
    • June 2026
    • April 2026
    • March 2026
    • August 2025

    Categories

    • Crime
    • District
    • Entertainment
    • Home
    • National
    • Politics
    • Public
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.