Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • District
    • Entertainment
    • English
      • English
    The Prime Voice
    Home»Politics»“ದಲಿತ ಅಂತ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ!” — ರಾಜೀನಾಮೆ ಕೇಳಿದ ವಿಪಕ್ಷಗಳಿಗೆ ಸಚಿವ ನಾಗೇಂದ್ರ ತಿರುಗೇಟು
    Politics

    “ದಲಿತ ಅಂತ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ!” — ರಾಜೀನಾಮೆ ಕೇಳಿದ ವಿಪಕ್ಷಗಳಿಗೆ ಸಚಿವ ನಾಗೇಂದ್ರ ತಿರುಗೇಟು

    SandeshBy SandeshAugust 19, 2026No Comments2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ವಾಲ್ಮೀಕಿ ನಿಗಮ ಹಗರಣದ ಆರೋಪಗಳ ನಡುವೆ ನಾಗೇಂದ್ರ ಆಕ್ರೋಶ | “ನನ್ನ ಖಾತೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ” | “ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ”

    ಬೆಂಗಳೂರು (ಆ.19): ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ, ಮೂರು ದಿನಗಳ ಬಳಿಕ ಸಚಿವ ಬಿ. ನಾಗೇಂದ್ರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಕೆಲ ದಾಖಲೆಗಳೊಂದಿಗೆ ಸುದ್ದಿಗೋಷ್ಠಿಗೆ ಆಗಮಿಸಿದ ನಾಗೇಂದ್ರ, “ನನ್ನ ರಾಜೀನಾಮೆ ಕೇಳುವ ಮುನ್ನ ನಿಮ್ಮ ನಾಯಕರ ರಾಜೀನಾಮೆ ಕೇಳಿ” ಎಂದು ವಿಪಕ್ಷಗಳಿಗೆ ಸವಾಲ್ ಹಾಕಿದ್ದಾರೆ.

    “ನನ್ನ ಖಾತೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ” ಎಂದು ಸ್ಪಷ್ಟಪಡಿಸಿದ ಅವರು, ವಾಲ್ಮೀಕಿ ನಿಗಮದಿಂದ ₹187 ಕೋಟಿ ವರ್ಗಾವಣೆಯಾಗಿದ್ದರೂ ಅದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಗಮನಕ್ಕೆ ಬಂದ ಬಳಿಕ ₹100 ಕೋಟಿಯನ್ನು ಫ್ರೀಜ್ ಮಾಡಿಸಲಾಗಿತ್ತು ಎಂದಿದ್ದಾರೆ.

    “ತನಿಖೆಗೆ ಅಡ್ಡಿಯಾಗಬಾರದೆಂದು ನಾನೇ ರಾಜೀನಾಮೆ ಕೊಟ್ಟೆ”

    SIT ತನಿಖೆ ಆರಂಭವಾದ ಸಂದರ್ಭದಲ್ಲಿ ತಾವು ಸಚಿವರಾಗಿದ್ದರೆ ತನಿಖೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೆ ಎಂದು ನಾಗೇಂದ್ರ ಹೇಳಿದ್ದಾರೆ. SIT ತನಿಖೆಯಲ್ಲಿ ಸುಮಾರು ₹79 ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ ಎಂದಿದ್ದಾರೆ.

    “ದಲಿತ ಅಂತ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ”

    ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಒತ್ತಡದ ಹಿಂದೆ ಜಾತಿಯ ಕಾರಣವಿದೆ ಎಂದು ಆರೋಪಿಸಿದ ನಾಗೇಂದ್ರ, “ದಲಿತ ಮತ್ತೊಮ್ಮೆ ಮಂತ್ರಿಯಾಗಿದ್ದಾನೆ, ಅವನನ್ನು ಕೆಳಗಿಳಿಸಬೇಕೆಂದು ಈ ರೀತಿ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

    ಸಂವಿಧಾನದ ಪುಸ್ತಕ ಪ್ರದರ್ಶಿಸಿದ ಅವರು, “ಈ ಸಂವಿಧಾನ ನಮ್ಮನ್ನು ಕಾಪಾಡುತ್ತಿದೆ. ನಾನು ಹುಟ್ಟು ದಲಿತ, ಸಾಯೋದು ಸಹ ದಲಿತನಾಗಿಯೇ” ಎಂದು ಭಾವುಕವಾಗಿ ಹೇಳಿದ್ದಾರೆ.

    “ನನ್ನದು ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ”

    ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ನಾಗೇಂದ್ರ, “ನಾನು ಅಪರಾಧಿಯಲ್ಲ. ನನ್ನದು ತಪ್ಪಾಗಿದೆ ಎಂದು ಸಾಬೀತಾದರೆ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ” ಎಂದು ಹೇಳಿದ್ದಾರೆ.

    ವಿಪಕ್ಷ ನಾಯಕರ ವಿರುದ್ಧವೂ ಪ್ರಕರಣಗಳಿವೆ ಎಂದು ಪ್ರಸ್ತಾಪಿಸಿದ ಅವರು, “ನನ್ನ ರಾಜೀನಾಮೆ ಕೇಳುವ ಮೊದಲು ನಿಮ್ಮ ನಾಯಕರ ರಾಜೀನಾಮೆ ಪಡೆಯಿರಿ” ಎಂದು ತಿರುಗೇಟು ನೀಡಿದ್ದಾರೆ.

    ಕೊನೆಯಲ್ಲಿ, “ನಾನು ಚರ್ಚೆಗೆ ಸಿದ್ಧನಿದ್ದೇನೆ, ನೀವು ಬನ್ನಿ” ಎಂದು ವಿಪಕ್ಷಗಳಿಗೆ ನೇರ ಸವಾಲ್ ಹಾಕಿರುವ ಸಚಿವ ನಾಗೇಂದ್ರ ಅವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ

     

    Post Views: 26
    BengaluruNews BJP BNagendra BreakingNews Congress DalitIssue DalitPolitics EDInvestigation KannadaBreakingNews KannadaNews KarnatakaNews KarnatakaPoliticalNews KarnatakaPolitics MinisterNagendra NagendraChallenge NewsUpdate Opposition PoliticalNews ResignationDemand SITInvestigation ThePrimeVoice ValmikiCorporationScam ValmikiNigmadaHagarana Vidhanasoudha
    Share. Facebook Twitter Pinterest LinkedIn Tumblr Email
    Avatar photo
    Sandesh

    Related Posts

    ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.

    September 3, 2026

    ಓವರ್‌ಟೇಕ್ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ: ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR!.

    September 3, 2026

    ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ!.

    August 26, 2026
    Leave A Reply Cancel Reply

    Recent Posts

    • 2026ರಲ್ಲಿ ಜಗತ್ತು ನಡುಗುತ್ತಾ? ನೇಪಾಳ ದುರಂತದ ಬಳಿಕ ಮತ್ತೆ ವೈರಲ್ ಆಯ್ತು ಬಾಬಾ ವಂಗಾ ಭವಿಷ್ಯ!.
    • ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.
    • India Postal Department: ಮಹಿಳೆಯರಿಗೆ ಅಂಚೆ ಇಲಾಖೆಯಿಂದ ಭರ್ಜರಿ ಅವಕಾಶ! ‘ಪೋಸ್ಟಲ್ ಶಕ್ತಿ’ ಹುದ್ದೆಗೆ ಸೆ.11ರಂದು ನೇರ ಸಂದರ್ಶನ.
    • ಓವರ್‌ಟೇಕ್ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ: ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR!.
    • ಬೆಂಗಳೂರು ಪವರ್ ಕಟ್: ಬೆಂಗಳೂರಿಗರಿಗೆ ಅಲರ್ಟ್! ಸೆ.3ರಂದು ಈ ಪ್ರಮುಖ ಪ್ರದೇಶಗಳಲ್ಲಿ 4 ಗಂಟೆ ಕರೆಂಟ್ ಇರಲ್ಲ.

    Recent Comments

    No comments to show.

    Archives

    • September 2026
    • August 2026
    • July 2026
    • June 2026
    • April 2026
    • March 2026
    • August 2025

    Categories

    • Crime
    • District
    • Entertainment
    • Home
    • National
    • Politics
    • Public
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.