ಚೀನಾ, .18: ಚೀನಾದಲ್ಲಿ ಜೀವನ ಅಗ್ಗ ಎಂಬ ಅಭಿಪ್ರಾಯವಿದ್ದರೂ, ಶಾಂಘೈ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ ಐಷಾರಾಮಿ ಜೀವನಶೈಲಿ ದುಬಾರಿಯಾಗಿದೆ ಎಂಬುದನ್ನು ಭಾರತೀಯ ಕುಟುಂಬವೊಂದರ ಮಾಸಿಕ ಖರ್ಚಿನ ವಿವರಗಳು ತೋರಿಸಿವೆ.

ಶಾಂಘೈನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆ ಶರ್ಮಾ ಅವರು ತಮ್ಮ ನಾಲ್ವರು ಸದಸ್ಯರ ಕುಟುಂಬದ ಮಾಸಿಕ ಖರ್ಚಿನ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಕುಟುಂಬದ ಜೀವನಶೈಲಿ ಮತ್ತು ವೈಯಕ್ತಿಕ ಆಯ್ಕೆಗಳಿಗೆ ಅನುಗುಣವಾಗಿ ತಿಂಗಳಿಗೆ ಸುಮಾರು 9.81 ಲಕ್ಷ ಖರ್ಚಾಗುತ್ತಿದೆ.

ಖರ್ಚಿನ ಪ್ರಮುಖ ವಿವರಗಳು

  •  ಮನೆ ಬಾಡಿಗೆ: ₹3.5 ಲಕ್ಷ
  •  ಅಂತರರಾಷ್ಟ್ರೀಯ ಶಾಲಾ ಶುಲ್ಕ: ₹3.5 ಲಕ್ಷ
  •  ದಿನಸಿ: ₹70,750
  •  ಗೃಹೋಪಯೋಗಿ ಕೆಲಸ: ₹1 ಲಕ್ಷಕ್ಕೂ ಹೆಚ್ಚು
  •  ಸಾರ್ವಜನಿಕ ಸಾರಿಗೆ: ₹10,000
  •  ಮಕ್ಕಳ ಮನರಂಜನೆ ಹಾಗೂ ಪಠ್ಯೇತರ ಚಟುವಟಿಕೆ: ₹21,230
  •  ಹೊರಗೆ ಊಟ ಮತ್ತು ಶಾಪಿಂಗ್: ₹56,650
  •  ಒಟ್ಟು ಮಾಸಿಕ ಖರ್ಚು: ಸುಮಾರು 9,81,860

ಬಾಡಿಗೆ ಮತ್ತು ಶಿಕ್ಷಣಕ್ಕೇ 7 ಲಕ್ಷ!

ಕುಟುಂಬದ ಒಟ್ಟು ಖರ್ಚಿನಲ್ಲಿ ಮನೆ ಬಾಡಿಗೆ ಮತ್ತು ಮಕ್ಕಳ ಅಂತರರಾಷ್ಟ್ರೀಯ ಶಾಲಾ ಶುಲ್ಕವೇ ಪ್ರಮುಖ ಪಾಲು ಹೊಂದಿದೆ. ಶಾಂಘೈ ಡೌನ್‌ಟೌನ್‌ನಲ್ಲಿರುವ ಮನೆಯ ಬಾಡಿಗೆಗೆ ತಿಂಗಳಿಗೆ ಸುಮಾರು 25,000 ಯುವಾನ್ (3.5 ಲಕ್ಷ) ಪಾವತಿಸಲಾಗುತ್ತಿದ್ದು, ಮಕ್ಕಳ ಶಾಲಾ ಶುಲ್ಕಕ್ಕೂ ಸುಮಾರು 25,000 ಯುವಾನ್ (3.5 ಲಕ್ಷ) ವೆಚ್ಚವಾಗುತ್ತಿದೆ.

ಇವೆರಡನ್ನೇ ಸೇರಿಸಿದರೆ ಕುಟುಂಬದ ಮಾಸಿಕ ಖರ್ಚಿನ ಸುಮಾರು 7 ಲಕ್ಷ ವಸತಿ ಮತ್ತು ಶಿಕ್ಷಣಕ್ಕೆ ಹೋಗುತ್ತಿದೆ.

ಚೀನಾ ಅಗ್ಗಎಂಬ ಅಭಿಪ್ರಾಯಕ್ಕೆ ಶಾಕ್!

ತಮ್ಮ ಖರ್ಚಿನ ವಿವರಗಳನ್ನು ಹಂಚಿಕೊಂಡಿರುವ ಶರ್ಮಾ, ಇದು ಸಾಮಾನ್ಯ ಜೀವನ ವೆಚ್ಚವಲ್ಲ; ತಮ್ಮ ಕುಟುಂಬದ ಜೀವನಶೈಲಿ ಮತ್ತು ವೈಯಕ್ತಿಕ ಆಯ್ಕೆಗಳಿಗೆ ಅನುಗುಣವಾದ ಖರ್ಚು ಎಂದು ಸ್ಪಷ್ಟಪಡಿಸಿದ್ದಾರೆ. ಕಂಪನಿಯಿಂದ ಮನೆ ಬಾಡಿಗೆ ಅಥವಾ ಶಾಲಾ ಶುಲ್ಕಕ್ಕೆ ಯಾವುದೇ ಸಹಾಯಧನ ಸಿಗದ ಕಾರಣ ಈ ವೆಚ್ಚವನ್ನು ಕುಟುಂಬವೇ ಭರಿಸುತ್ತಿದೆ.

ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಚೀನಾದಲ್ಲಿ ಜೀವನ ಅಗ್ಗ ಎಂಬ ಅಭಿಪ್ರಾಯದ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರ, ಚೀನಾ ಅಗ್ಗವಾಗಿದೆ ಎಂದು ಇಲ್ಲಿಗೆ ಬರುವ ಮೊದಲು ಅಂದುಕೊಂಡಿದ್ದೆ. ಆದರೆ ಬಂದ ನಂತರ ಎಲ್ಲವೂ ಎರಡು ಪಟ್ಟು ದುಬಾರಿ ಎಂದು ಅರಿವಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

ಶಾಂಘೈ, ಬೀಜಿಂಗ್ನಂತಹ ಪ್ರಮುಖ ನಗರಗಳಲ್ಲಿ ಸಾಮಾನ್ಯ ಜೀವನ ವೆಚ್ಚಕ್ಕಿಂತ ಜೀವನಶೈಲಿ, ವಸತಿ ಮತ್ತು ಶಿಕ್ಷಣದ ಆಯ್ಕೆಗಳು ಖರ್ಚನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಬಹುದು ಎಂಬುದಕ್ಕೆ ಕುಟುಂಬದ ಅನುಭವ ಒಂದು ಉದಾಹರಣೆಯಾಗಿದೆ

 

Share.
Leave A Reply

Exit mobile version