Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • Entertainment
    • English
      • English
    The Prime Voice
    Home»Home»ಜೈಲರ್ ಸಿದ್ದರಾಮಪ್ಪ ಆತ್ಮಹತ್ಯೆ; ಕುಟುಂಬಸ್ಥರಿಂದ ಮಾನಸಿಕ ಒತ್ತಡದ ಆರೋಪ
    Home

    ಜೈಲರ್ ಸಿದ್ದರಾಮಪ್ಪ ಆತ್ಮಹತ್ಯೆ; ಕುಟುಂಬಸ್ಥರಿಂದ ಮಾನಸಿಕ ಒತ್ತಡದ ಆರೋಪ

    The Prime VoiceBy The Prime VoiceJune 13, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ (37) ಅವರು ತಮ್ಮ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಮಾಹಿತಿಯ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ಆಡಳಿತಾತ್ಮಕ ಕಾರಣಗಳಿಂದ ಸಿದ್ದರಾಮಪ್ಪ ಅವರನ್ನು ಅಮಾನತುಗೊಳಿಸಿ ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಧಾರವಾಡದಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

    ಧಾರವಾಡದ ಹೊಸ ಬಸ್ ನಿಲ್ದಾಣದ ಸಮೀಪದ ವಸತಿಗೃಹದಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಸದಸ್ಯರು ಹಲವು ಬಾರಿ ಕರೆ ಮಾಡಿದರೂ ಅವರು ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದು, ಡಿಜಿಪಿ ಅವರಿಂದ ನಿರಂತರ ಬೆದರಿಕೆ ಹಾಗೂ ಮಾನಸಿಕ ಒತ್ತಡ ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ. ಇದೇ ಕಾರಣದಿಂದ ಸಿದ್ದರಾಮಪ್ಪ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುಕೊ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕೂಡ ಸ್ಥಳ ಪರಿಶೀಲನೆ ನಡೆಸಿದ್ದು, ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪ್ರಕರಣದ ಕುರಿತು ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    Post Views: 375
    Share. Facebook Twitter Pinterest LinkedIn Tumblr Email
    Avatar photo
    The Prime Voice
    • Website

    Related Posts

    ವಕೀಲೆಗೆ ಠಾಣೆಯಲ್ಲಿ ಬೂಟಿನ ಕಾಲಿನಲ್ಲಿ ಒದ್ದ ಮಹಿಳಾ ಇನ್‌ಸ್ಪೆಕ್ಟರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶನ

    April 20, 2026

    ಭಾರತವು ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸಲು ಕಣ್ಣಿಟ್ಟಿದೆ; ಪ್ರಧಾನಿ ಮೋದಿ ₹3,300 ಕೋಟಿ ಮೌಲ್ಯದ ಗುಜರಾತ್ ಘಟಕ ಯೋಜನೆಗೆ ಚಾಲನೆ ನೀಡಿದ್ದಾರೆ.

    March 31, 2026

    Elementor #104

    March 31, 2026
    Leave A Reply Cancel Reply

    Recent Posts

    • IAF AN-32 ವಿಮಾನ ಪತನ: ಲ್ಯಾಂಡಿಂಗ್ ವೇಳೆ ಭೀಕರ ದುರಂತ, 5 ಭಾರತೀಯ ವಾಯುಸೇನಾ ಸಿಬ್ಬಂದಿ ಸಾವು!
    • “ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”
    • ಅಜಿತ್ ಸಂಭಾವನೆಗೆ ನಿರ್ಮಾಪಕರ ಶಾಕ್: ‘AK64’ ಘೋಷಣೆ ಮತ್ತೆ ಮುಂದೂಡಿಕೆ?
    • INDIA VS PAK ಮಹಿಳೆಯರು ICC T20I ವಿಶ್ವಕಪ್
    • ‘ರಣವೀರ್‌ರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ’: ಬಾಲಿವುಡ್ ಸಂಸ್ಕೃತಿಗೆ ಕಂಗನಾ ತಿರುಗೇಟು

    Recent Comments

    No comments to show.

    Archives

    • June 2026
    • April 2026
    • March 2026
    • August 2025

    Categories

    • Crime
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.