Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • District
    • Entertainment
    • English
      • English
    The Prime Voice
    Home»Crime»₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಳವಳ್ಳಿ ಗ್ರಾಮಾಂತರ ಠಾಣೆಯ ASI ಶಿವಕುಮಾರ್ ಲೋಕಾಯುಕ್ತ ಬಲೆಗೆ
    Crime

    ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಳವಳ್ಳಿ ಗ್ರಾಮಾಂತರ ಠಾಣೆಯ ASI ಶಿವಕುಮಾರ್ ಲೋಕಾಯುಕ್ತ ಬಲೆಗೆ

    The Prime VoiceBy The Prime VoiceJune 11, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಮಂಡ್ಯ: ಲಂಚ ಸ್ವೀಕರಿಸುತ್ತಿದ್ದ ವೇಳೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ (ASI) ಶಿವಕುಮಾರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.

    ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಗೌಡ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಠಾಣಾ ಮಟ್ಟದಲ್ಲೇ ಜಾಮೀನು (Station Bail) ನೀಡಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಹೇಳಿ ASI ಶಿವಕುಮಾರ್ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

    ಆರೋಪಿಯ ಕುಟುಂಬದವರು ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದು, ಲಂಚದ ಬೇಡಿಕೆಗೆ ಸಂಬಂಧಿಸಿದ ದೂರವಾಣಿ ಸಂಭಾಷಣೆಯನ್ನು ಸಹ ದಾಖಲಿಸಿ ಸಾಕ್ಷ್ಯವಾಗಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

    ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬುಧವಾರ ರಾತ್ರಿ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲೇ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ASI ಶಿವಕುಮಾರ್ ಅವರನ್ನು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ.

    ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಲೇಪಾಕ್ಷಮೂರ್ತಿ ಹಾಗೂ ಬ್ಯಾಟರಾಯಗೌಡ ನೇತೃತ್ವದಲ್ಲಿ ಈ ದಾಳಿ ಕಾರ್ಯಾಚರಣೆ ನಡೆದಿದ್ದು, ಬಂಧಿತ ASIಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    Post Views: 930
    accepting-a-bribe-of-₹10000
    Share. Facebook Twitter Pinterest LinkedIn Tumblr Email
    Avatar photo
    The Prime Voice
    • Website

    Related Posts

    ವೈರಲ್ ವಿಡಿಯೋದಿಂದ ಬಯಲಾಯ್ತು ಪಿಎಸ್‌ಐನ ವಿಕೃತ ಕೃತ್ಯ; ಪೋಕ್ಸೋ ಅಡಿಯಲ್ಲಿ ಬಂಧನ

    June 30, 2026

    “ನ್ಯಾಯದ ದಾರಿಯಲ್ಲೇ ಅನ್ಯಾಯದ ಆಟ – 20 ಲಕ್ಷ ರೂ. ಸುಲಿಗೆ ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ವಿರುದ್ಧ ಪ್ರಕರಣ ಬಯಲು!”

    June 19, 2026

    “ಖಾಕಿಗೆ ಕಳಂಕ: ಅಕ್ಕಿ ವ್ಯಾಪಾರಿಗಳಿಂದ ಲಂಚ ಪಡೆದ ಪೊಲೀಸರ ಮೇಲೆ ಲೋಕಾಯುಕ್ತದ ಬಲೆ!”

    June 19, 2026
    Leave A Reply Cancel Reply

    Recent Posts

    • ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್; ಸಾಕ್ಷಿಗೆ ಬೆದರಿಕೆ ಆರೋಪದಲ್ಲಿ ದರ್ಶನ್ ಅಭಿಮಾನಿ ಬಳಗದ ಮೂವರು ಅರೆಸ್ಟ್
    • ಆರ್‌ಎಸ್‌ಎಸ್‌ ರಾಷ್ಟ್ರೀಯ ಶಕ್ತಿ ಸಮಾವೇಶಕ್ಕೆ ಬೆಳಗಾವಿ ಸಜ್ಜು; ಜುಲೈ 10ರಿಂದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮಹತ್ವದ ಸಭೆ
    • ಕ್ರಷರ್ ಬಂಡೆ ಕುಸಿದು ಭೀಕರ ದುರಂತ: 7 ಕಾರ್ಮಿಕರು ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ!
    • ಬಿಡದಿ ಮೆಗಾ ಟೌನ್‌ಶಿಪ್‌ಗೆ ಹೈಕೋರ್ಟ್ ಕಂಟಕ: ಸರ್ಕಾರದ ಯೋಜನೆಗೆ ಆರಂಭದಲ್ಲೇ ತಣ್ಣೀರೆರಚಿದ ಪಿಐಎಲ್!
    • ವೈರಲ್ ವಿಡಿಯೋದಿಂದ ಬಯಲಾಯ್ತು ಪಿಎಸ್‌ಐನ ವಿಕೃತ ಕೃತ್ಯ; ಪೋಕ್ಸೋ ಅಡಿಯಲ್ಲಿ ಬಂಧನ

    Recent Comments

    No comments to show.

    Archives

    • July 2026
    • June 2026
    • April 2026
    • March 2026
    • August 2025

    Categories

    • Crime
    • District
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.