ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ ದುನಿಯಾ ವಿಜಯ್ ಅವರ ದಾಂಪತ್ಯ ಜೀವನಕ್ಕೆ ಕೊನೆಗೂ ಅಧಿಕೃತ ತೆರೆ ಬಿದ್ದಿದೆ. ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರ ನಡುವಿನ ವಿಚ್ಛೇದನ ಪ್ರಕರಣಕ್ಕೆ ಹೈಕೋರ್ಟ್ ಅಂತಿಮ ತೀರ್ಪು ನೀಡಿದ್ದು, ನಾಗರತ್ನ ಅವರಿಗೆ ₹2 ಕೋಟಿ ಒನ್‌ಟೈಮ್ ಸೆಟಲ್‌ಮೆಂಟ್‌ ರೂಪದಲ್ಲಿ ಜೀವನಾಂಶ ನೀಡುವಂತೆ ಆದೇಶಿಸಿದೆ.

1999ರಲ್ಲಿ ನಾಗರತ್ನ ಅವರನ್ನು ವಿವಾಹವಾಗಿದ್ದ ದುನಿಯಾ ವಿಜಯ್, ಹಲವು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ವರ್ಷಗಳು ಕಳೆದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ, ಕೌಟುಂಬಿಕ ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು.

2013ರಲ್ಲಿ ಮೊದಲ ಬಾರಿಗೆ ವಿಚ್ಛೇದನದ ಮಾತು,

2013ರಲ್ಲಿ ವಿಜಯ್ ಹಾಗೂ ನಾಗರತ್ನ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವಿಚ್ಛೇದನದ ಮಾತುಗಳು ಕೇಳಿಬಂದಿದ್ದರೂ, 2014ರಲ್ಲಿ ಇಬ್ಬರೂ ಮತ್ತೆ ಒಂದಾಗಿದ್ದರು. ಆದರೆ ನಂತರವೂ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದ ಹಿನ್ನೆಲೆಯಲ್ಲಿ, 2018ರಲ್ಲಿ ದುನಿಯಾ ವಿಜಯ್ ಮತ್ತೊಮ್ಮೆ ಕಾನೂನು ಹೋರಾಟಕ್ಕೆ ಮುಂದಾಗಿದ್ದರು.

ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಮುಂದುವರಿದಿದ್ದು, ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಇದೀಗ ಮಹತ್ವದ ತೀರ್ಪು ನೀಡಿದೆ.

ನಾಗರತ್ನ ಅವರಿಗೆ 2 ಕೋಟಿ ಜೀವನಾಂಶ,

ಹೈಕೋರ್ಟ್‌ ತೀರ್ಪಿನಂತೆ, ನಾಗರತ್ನ ಅವರಿಗೆ 2 ಕೋಟಿ ಮೊತ್ತವನ್ನು ಮೂರು ತಿಂಗಳೊಳಗೆ ಒನ್ಟೈಮ್ ಸೆಟಲ್ಮೆಂಟ್ ಆಗಿ ಪಾವತಿಸಬೇಕು ಎಂದು ಸೂಚಿಸಲಾಗಿದೆ.

ಅದೇ ವೇಳೆ, ದಂಪತಿಯ ಮೂವರು ಮಕ್ಕಳ ಜವಾಬ್ದಾರಿ ದುನಿಯಾ ವಿಜಯ್ ಅವರದ್ದೇ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

27 ವರ್ಷಗಳ ದಾಂಪತ್ಯಕ್ಕೆ ಅಂತ್ಯ,

1999ರಲ್ಲಿ ಆರಂಭವಾಗಿದ್ದ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ದಾಂಪತ್ಯ ಜೀವನ ಇದೀಗ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಅಧಿಕೃತವಾಗಿ ಅಂತ್ಯಗೊಂಡಿದೆ.

ಒಂದು ಕಾಲದಲ್ಲಿ ಒಟ್ಟಿಗೆ ಬದುಕು ಕಟ್ಟಿಕೊಂಡಿದ್ದ ಈ ಜೋಡಿ ಇದೀಗ ತಮ್ಮದೇ ದಾರಿಯಲ್ಲಿ ಸಾಗುವಂತಾಗಿದೆ. ಚಿತ್ರರಂಗದಲ್ಲಿ ದುನಿಯಾ ವಿಜಯ್ ಅವರ ವೃತ್ತಿಜೀವನ ಮುಂದುವರಿದಿರುವ ನಡುವೆಯೇ, ಅವರ ವೈಯಕ್ತಿಕ ಜೀವನದ ಈ ಅಧ್ಯಾಯ ಅಂತಿಮಗೊಂಡಿದೆ.

Share.
Leave A Reply

Exit mobile version