2022ರ ಮಹಿಳಾ ಏಕದಿನ ವಿಶ್ವಕಪ್ನಿಂದ ಇಂದಿನವರೆಗೆ ಪಾಕಿಸ್ತಾನ ಮಹಿಳಾ ತಂಡವು ಭಾರತ ಮಹಿಳಾ ತಂಡದ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಈ ಅವಧಿಯಲ್ಲಿ ನಡೆದ ನಾಲ್ಕು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಭಾರತ ಮಹಿಳಾ ತಂಡವೇ ಜಯಭೇರಿ ಬಾರಿಸಿದೆ. ಈಗ ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ನಡುವೆ ಭಾರತ ತನ್ನ ಪ್ರಾಬಲ್ಯ ಮುಂದುವರಿಸುತ್ತದೆಯೇ ಅಥವಾ ಪಾಕಿಸ್ತಾನ ಮೊದಲ ಗೆಲುವಿನ ಸಿಹಿ ಕಾಣುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ನಾಳೆ ಸಂಜೆ 7 ಗಂಟೆಯವರೆಗೆ ಕಾಯೋಣ