Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • District
    • Entertainment
    • English
      • English
    The Prime Voice
    Home»Sports»ಗಾಲೆ ಟೆಸ್ಟ್‌ನಲ್ಲಿ ಮಾನವ್ ಸುತಾರ್‌ ಸ್ಪಿನ್ ಸುಂಟರಗಾಳಿ! ಅಶ್ವಿನ್, ಭಜ್ಜಿ ದಾಖಲೆಗಳ ಸಾಲಿಗೆ ಎಂಟ್ರಿ — 10 ವಿಕೆಟ್ ಕಬಳಿಸಿ ಐತಿಹಾಸಿಕ ಸಾಧನೆ!
    Sports

    ಗಾಲೆ ಟೆಸ್ಟ್‌ನಲ್ಲಿ ಮಾನವ್ ಸುತಾರ್‌ ಸ್ಪಿನ್ ಸುಂಟರಗಾಳಿ! ಅಶ್ವಿನ್, ಭಜ್ಜಿ ದಾಖಲೆಗಳ ಸಾಲಿಗೆ ಎಂಟ್ರಿ — 10 ವಿಕೆಟ್ ಕಬಳಿಸಿ ಐತಿಹಾಸಿಕ ಸಾಧನೆ!

    SandeshBy SandeshAugust 20, 2026No Comments2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಸ್ಪಿನ್ನರ್ ಮಾನವ್ ಸುತಾರ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದು, ಭಾರತ ತಂಡಕ್ಕೆ 165 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

    372 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 206 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಸುತಾರ್ ಪ್ರಮುಖ ಪಾತ್ರವಹಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಬರೋಬ್ಬರಿ 6 ವಿಕೆಟ್ ಕಬಳಿಸಿದ ಅವರು, ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳ ಸಾಧನೆ ಮಾಡಿದರು.

    ಮೊದಲ ಎರಡು ಟೆಸ್ಟ್‌ಗಳಲ್ಲೇ ಸತತ 6 ವಿಕೆಟ್‌ಗಳ ಗೊಂಚಲು!

    ಮಾನವ್ ಸುತಾರ್ ಅವರ ಈ ಪ್ರದರ್ಶನ ಮತ್ತೊಂದು ಐತಿಹಾಸಿಕ ದಾಖಲೆಗೂ ಕಾರಣವಾಗಿದೆ. ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಎರಡು ಪಂದ್ಯಗಳಲ್ಲೇ ತಲಾ 6 ವಿಕೆಟ್‌ಗಳ ಗೊಂಚಲು ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

    ಇದಕ್ಕೂ ಮೊದಲು ಈ ಸಾಧನೆಯನ್ನು ಭಾರತದ ಮಾಜಿ ಸ್ಪಿನ್ನರ್ ನರೇಂದ್ರ ಹಿರಸ್ವಾನಿ ಮಾಡಿದ್ದರು.

    ಸುತಾರ್ ಕಳೆದ ತಿಂಗಳು ಮುಲ್ಲನ್‌ಪುರದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದಿದ್ದರು. ಇದೀಗ ತಮ್ಮ ಎರಡನೇ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

    ಹರ್ಭಜನ್ ಸಿಂಗ್ ದಾಖಲೆ ಉಡೀಸ್!

    24 ವರ್ಷ 12 ದಿನ ವಯಸ್ಸಿನ ಮಾನವ್ ಸುತಾರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್‌ಗಳ ಸಾಧನೆ ಮಾಡಿದ ಅತ್ಯಂತ ಕಿರಿಯ ಸ್ಪಿನ್ನರ್ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

    ಈ ಹಿಂದೆ ಹರ್ಭಜನ್ ಸಿಂಗ್ 28 ವರ್ಷ 28 ದಿನಗಳ ವಯಸ್ಸಿನಲ್ಲಿ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಈ ದಾಖಲೆ ಹೊಂದಿದ್ದರು. ಇದೀಗ ಸುತಾರ್ ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

    10 ವಿಕೆಟ್‌ಗಳ ಸಾಧನೆ ಮಾಡಿದ ಕಿರಿಯ ಸ್ಪಿನ್ನರ್‌ಗಳ ಪಟ್ಟಿಯಲ್ಲಿ:

    • ಮಾನವ್ ಸುತಾರ್ – 24 ವರ್ಷ 12 ದಿನ
    • ಹರ್ಭಜನ್ ಸಿಂಗ್ – 28 ವರ್ಷ 28 ದಿನ
    • ಆರ್. ಅಶ್ವಿನ್ – 28 ವರ್ಷ 329 ದಿನ
    • ಬಿಷನ್ ಸಿಂಗ್ ಬೇಡಿ – 31 ವರ್ಷ 82 ದಿನ
    • ಬಿ. ಚಂದ್ರಶೇಖರ್ – 32 ವರ್ಷ 227 ದಿನ

    ಎಂಬುದು ಗಮನಾರ್ಹ.

    ಇರ್ಫಾನ್ ಪಠಾಣ್ ದಾಖಲೆ ಇನ್ನೂ ಅಗ್ರಸ್ಥಾನದಲ್ಲಿ

    ವೇಗಿ ಮತ್ತು ಸ್ಪಿನ್ನರ್‌ಗಳನ್ನು ಒಳಗೊಂಡ ಒಟ್ಟಾರೆ ಪಟ್ಟಿಯಲ್ಲಿ, ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಸಾಧನೆ ಮಾಡಿದ ಕಿರಿಯ ಬೌಲರ್‌ಗಳ ಪೈಕಿ ಇರ್ಫಾನ್ ಪಠಾಣ್ ಅಗ್ರಸ್ಥಾನದಲ್ಲಿದ್ದಾರೆ. ಪಠಾಣ್ 20 ವರ್ಷ 44 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

    ಅವರ ನಂತರ ಚೇತನ್ ಶರ್ಮಾ, ಇಶಾಂತ್ ಶರ್ಮಾ ಸೇರಿದಂತೆ ಹಲವು ಭಾರತೀಯ ಬೌಲರ್‌ಗಳು ಈ ಸಾಧನೆ ಮಾಡಿದ್ದಾರೆ.

    ಮಾನವ್ ಸುತಾರ್ ಅವರ ಈ ಅದ್ಭುತ ಸ್ಪಿನ್ ದಾಳಿಯಿಂದಾಗಿ ಗಾಲೆ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಶ್ರೀಲಂಕಾ ಮೇಲೆ ಒತ್ತಡ ಹೆಚ್ಚಾಗಿದೆ.

    ಯುವ ಸುತಾರ್‌ರ ಸ್ಪಿನ್ ಜಾದು — ಗಾಲೆಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು, ಸರಣಿಯಲ್ಲಿ 1-0 ಮುನ್ನಡೆ!

    Post Views: 30
    1-0 Series Lead 10 Wickets 10 ವಿಕೆಟ್ 10 ವಿಕೆಟ್ ಹಾಲ್ 10-Wicket Haul 165 ರನ್‌ಗಳ ಭರ್ಜರಿ ಜಯ 165-Run Victory 6 ವಿಕೆಟ್ ಗೊಂಚಲು Big Win for India Cricket History. Galle Test Harbhajan Singh's Record Broken Historic Achievement Historic Record India vs Sri Lanka India's Dominance in Galle Manav Sutar Six-Wicket Haul Spin Storm Sri Lanka All Out Sutar 10 Wickets | Spin Storm | Historic Record | 6 Wicket Haul | Galle Test | India Win | 165 Run Victory | Young Spinner | Record Breaker | Team India Sutar's Spin Magic Team India Young Spinner Youngest Spinner ಐತಿಹಾಸಿಕ ದಾಖಲೆ ಐತಿಹಾಸಿಕ ಸಾಧನೆ ಕಿರಿಯ ಸ್ಪಿನ್ನರ್ ಕ್ರಿಕೆಟ್ ಇತಿಹಾಸ ಗಾಲೆ ಟೆಸ್ಟ್ ಗಾಲೆಯಲ್ಲಿ ಭಾರತದ ಗರ್ಜನೆ ಟೀಂ ಇಂಡಿಯಾ ಭಾರತಕ್ಕೆ ಭರ್ಜರಿ ಗೆಲುವು ಮಾನವ್ ಸುತಾರ್ ಯುವ ಸ್ಪಿನ್ನರ್ ಶ್ರೀಲಂಕಾ ಆಲೌಟ್ ಶ್ರೀಲಂಕಾ ವಿರುದ್ಧ ಭಾರತ ಸರಣಿಯಲ್ಲಿ 1-0 ಮುನ್ನಡೆ ಸುತಾರ್ ಸ್ಪಿನ್ ಜಾದು ಸ್ಪಿನ್ ಸುಂಟರಗಾಳಿ ಹರ್ಭಜನ್ ಸಿಂಗ್ ದಾಖಲೆ ಉಡೀಸ್
    Share. Facebook Twitter Pinterest LinkedIn Tumblr Email
    Avatar photo
    Sandesh

    Related Posts

    IND vs SL: ಇನ್ನಿಂಗ್ಸ್ ಸೋಲು ತಪ್ಪಿಸಲು ಶ್ರೀಲಂಕಾ ಹೋರಾಟ; ಫಾಲೋ-ಆನ್ ತಪ್ಪಿಸಲು ಇನ್ನೂ 39 ರನ್ ಅಗತ್ಯ!.

    August 26, 2026

    ವೈಭವ್ ಸೂರ್ಯವಂಶಿಯ ಬೌಲಿಂಗ್‌ಗೂ ಸಿಕ್ಸರ್‌ಗಳಷ್ಟೇ ತೀಕ್ಷ್ಣತೆ; ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ ಯುವ ತಾರೆ!

    August 26, 2026

    ಗಾಲೆಯಲ್ಲಿ ಪಂತ್‌ ಧಮಾಕಾ! 94 ವರ್ಷಗಳ ಇತಿಹಾಸದಲ್ಲಿ ಯಾರಿಗೂ ಸಾಧ್ಯವಾಗದ ಸಾಧನೆ! 100 ಟೆಸ್ಟ್‌ ಸಿಕ್ಸರ್‌ ಸಿಡಿಸಿ ಚರಿತ್ರೆ ಬರೆದ ರಿಷಭ್ ಪಂತ್!

    August 18, 2026
    Leave A Reply Cancel Reply

    Recent Posts

    • 2026ರಲ್ಲಿ ಜಗತ್ತು ನಡುಗುತ್ತಾ? ನೇಪಾಳ ದುರಂತದ ಬಳಿಕ ಮತ್ತೆ ವೈರಲ್ ಆಯ್ತು ಬಾಬಾ ವಂಗಾ ಭವಿಷ್ಯ!.
    • ದುನಿಯಾ ವಿಜಯ್ ದಾಂಪತ್ಯ ಜೀವನಕ್ಕೆ ಅಂತ್ಯ: 27 ವರ್ಷಗಳ ಒಡನಾಟಕ್ಕೆ ಹೈಕೋರ್ಟ್‌ ಮುದ್ರೆ, ಪತ್ನಿಗೆ ₹2 ಕೋಟಿ ಜೀವನಾಂಶ!.
    • India Postal Department: ಮಹಿಳೆಯರಿಗೆ ಅಂಚೆ ಇಲಾಖೆಯಿಂದ ಭರ್ಜರಿ ಅವಕಾಶ! ‘ಪೋಸ್ಟಲ್ ಶಕ್ತಿ’ ಹುದ್ದೆಗೆ ಸೆ.11ರಂದು ನೇರ ಸಂದರ್ಶನ.
    • ಓವರ್‌ಟೇಕ್ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ: ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR!.
    • ಬೆಂಗಳೂರು ಪವರ್ ಕಟ್: ಬೆಂಗಳೂರಿಗರಿಗೆ ಅಲರ್ಟ್! ಸೆ.3ರಂದು ಈ ಪ್ರಮುಖ ಪ್ರದೇಶಗಳಲ್ಲಿ 4 ಗಂಟೆ ಕರೆಂಟ್ ಇರಲ್ಲ.

    Recent Comments

    No comments to show.

    Archives

    • September 2026
    • August 2026
    • July 2026
    • June 2026
    • April 2026
    • March 2026
    • August 2025

    Categories

    • Crime
    • District
    • Entertainment
    • Home
    • National
    • Politics
    • Public
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.