Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • District
    • Entertainment
    • English
      • English
    The Prime Voice
    Home»Entertainment»ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್; ಸಾಕ್ಷಿಗೆ ಬೆದರಿಕೆ ಆರೋಪದಲ್ಲಿ ದರ್ಶನ್ ಅಭಿಮಾನಿ ಬಳಗದ ಮೂವರು ಅರೆಸ್ಟ್
    Entertainment

    ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್; ಸಾಕ್ಷಿಗೆ ಬೆದರಿಕೆ ಆರೋಪದಲ್ಲಿ ದರ್ಶನ್ ಅಭಿಮಾನಿ ಬಳಗದ ಮೂವರು ಅರೆಸ್ಟ್

    The Prime VoiceBy The Prime VoiceJuly 2, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿದಾರನಿಗೆ ಬೆದರಿಕೆ ಹಾಕಿದ ಆರೋಪದಡಿ ನಟ ದರ್ಶನ್ ಅಭಿಮಾನಿ ಬಳಗಕ್ಕೆ ಸೇರಿದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಅವರಿಗೆ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ಹೇಳದಂತೆ ಒತ್ತಡ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಸಾಕ್ಷಿದಾರ ಸಂದೀಪ್ ಅವರು ನ್ಯಾಯಾಲಯದ ಮುಂದೆ ಬೆದರಿಕೆ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡು ಅವರಿಗೆ ಭದ್ರತೆ ಒದಗಿಸಿದ್ದರು. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ವೇಣು, ಸುಹಾಸ್ ಹಾಗೂ ಪುನೀತ್ ಎಂಬ ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಹಿನ್ನೆಲೆಯೂ ಬೆಳಕಿಗೆ ಬಂದಿದೆ. ಆರೋಪಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ‘ಡಿ ಕಂಪನಿ’ ಹೆಸರಿನ ದರ್ಶನ್ ಅಭಿಮಾನಿ ಫ್ಯಾನ್ ಪೇಜ್‌ನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಇನ್ನು ವೇಣು ಮತ್ತು ಸುಹಾಸ್ ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

    ತನಿಖೆ ಪ್ರಕಾರ, ಸಾಕ್ಷಿದಾರ ಸಂದೀಪ್ ಅವರನ್ನು ಮಾತುಕತೆ ನಡೆಸುವ ನೆಪದಲ್ಲಿ ಕರೆಸಿಕೊಂಡ ಆರೋಪಿಗಳು, ಬಳಿಕ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದ್ದಾರೆ. ಇದೇ ವೇಳೆ ನ್ಯಾಯಾಲಯದಲ್ಲಿ ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳಬಾರದು ಎಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಸಂದೀಪ್ ಇದಕ್ಕೆ ಒಪ್ಪದಿದ್ದಾಗ, ಆರೋಪಿ ಸುಹಾಸ್ ಜೈಲಿನಲ್ಲಿರುವ ದರ್ಶನ್ ಹೆಸರನ್ನು ಪ್ರಸ್ತಾಪಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

    ಇಡೀ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿದ್ದಾರೆ. ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಶೆಡ್‌ಗೆ ಕರೆತಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಸಾಕ್ಷಿಗಳಿಗೆ ಬೆದರಿಕೆ ಆರೋಪದ ಈ ಹೊಸ ಬೆಳವಣಿಗೆ ತನಿಖೆಗೆ ಮತ್ತೊಂದು ಮಹತ್ವದ ಆಯಾಮ ನೀಡಿದೆ.

    Post Views: 36
    Bengaluru crime news breaking news crime news Karnataka Darshan Case Darshan Fan Arrest Darshan Latest News Darshan News Kannada Breaking News Karnataka crime news Police Investigation Renukaswamy Case Renukaswamy Latest Update Renukaswamy Murder Case The Prime Voice News Witness Threat Case ದರ್ಶನ್ ಅಭಿಮಾನಿ ಬಂಧನ ದರ್ಶನ್ ಕೇಸ್ ರೇಣುಕಾಸ್ವಾಮಿ ಕೇಸ್ ಸಾಕ್ಷಿಗೆ ಬೆದರಿಕೆ
    Share. Facebook Twitter Pinterest LinkedIn Tumblr Email
    Avatar photo
    The Prime Voice
    • Website

    Related Posts

    ಆರ್‌ಎಸ್‌ಎಸ್‌ ರಾಷ್ಟ್ರೀಯ ಶಕ್ತಿ ಸಮಾವೇಶಕ್ಕೆ ಬೆಳಗಾವಿ ಸಜ್ಜು; ಜುಲೈ 10ರಿಂದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮಹತ್ವದ ಸಭೆ

    July 2, 2026

    ಕ್ರಷರ್ ಬಂಡೆ ಕುಸಿದು ಭೀಕರ ದುರಂತ: 7 ಕಾರ್ಮಿಕರು ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ!

    July 2, 2026

    ತಮಿಳುನಾಡಿನ ಸೊಸೆಯಾಗಲಿರುವ ಶರ್ಮಿಳಾ ಮಾಂಡ್ರೆ! ಜೂನ್ 25ರಂದು ನಿಶ್ಚಿತಾರ್ಥ, ವರನ ಬಗ್ಗೆ ತಿಳಿದರೆ ಅಚ್ಚರಿ ಪಡ್ತೀರಾ!

    June 20, 2026
    Leave A Reply Cancel Reply

    Recent Posts

    • ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್; ಸಾಕ್ಷಿಗೆ ಬೆದರಿಕೆ ಆರೋಪದಲ್ಲಿ ದರ್ಶನ್ ಅಭಿಮಾನಿ ಬಳಗದ ಮೂವರು ಅರೆಸ್ಟ್
    • ಆರ್‌ಎಸ್‌ಎಸ್‌ ರಾಷ್ಟ್ರೀಯ ಶಕ್ತಿ ಸಮಾವೇಶಕ್ಕೆ ಬೆಳಗಾವಿ ಸಜ್ಜು; ಜುಲೈ 10ರಿಂದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮಹತ್ವದ ಸಭೆ
    • ಕ್ರಷರ್ ಬಂಡೆ ಕುಸಿದು ಭೀಕರ ದುರಂತ: 7 ಕಾರ್ಮಿಕರು ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ!
    • ಬಿಡದಿ ಮೆಗಾ ಟೌನ್‌ಶಿಪ್‌ಗೆ ಹೈಕೋರ್ಟ್ ಕಂಟಕ: ಸರ್ಕಾರದ ಯೋಜನೆಗೆ ಆರಂಭದಲ್ಲೇ ತಣ್ಣೀರೆರಚಿದ ಪಿಐಎಲ್!
    • ವೈರಲ್ ವಿಡಿಯೋದಿಂದ ಬಯಲಾಯ್ತು ಪಿಎಸ್‌ಐನ ವಿಕೃತ ಕೃತ್ಯ; ಪೋಕ್ಸೋ ಅಡಿಯಲ್ಲಿ ಬಂಧನ

    Recent Comments

    No comments to show.

    Archives

    • July 2026
    • June 2026
    • April 2026
    • March 2026
    • August 2025

    Categories

    • Crime
    • District
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.